== ಖರ್ಜೂರ ಬೆಳೆಯುವ ಪ್ರದೇಶ == == ಖರ್ಜೂರದ ವಿಧಗಳು == ಚಿತ್ರ:[[೧]] ಸೌದಿ ಖರ್ಜೂರಗಳು ಮಬ್ರೂನ್: ಸಿಹಿ ಕಡಿಮೆ ಇದ್ದರೂ ಹೆಚ್ಚು ಆರೋಗ್ಯಕಾರಿ. ಇದು ತುಂಬಾ ಬೇಡಿಕೆಯ ಖರ್ಜೂರ. ಖುದ್ರಿ ಸಾಫ್ಟ್: ಸಿಲೆಂಡರ್ ಆಕಾರದ ಈ ಖರ್ಜೂರದ ರುಚಿ ವಿಶಿಷ್ಟವಾಗಿದೆ. ಸುಕ್ಕರಿ: ಸಣ್ಣದಿದ್ದು, ಗೋಳಾಕಾರ, ತೆಳುಬೂದಿ ಬಣ್ಣ ಹೊಂದಿರುತ್ತದೆ. ಸಗೈ: ತುಂಬಾ ರುಚಿಕರ, ಜಗಿಯಬಹುದು. ಖಲಾಸ್: ತುಂಬಾ ಸಿಹಿ ಅಂಬರ: ಶುಭಕಾರಿ ಖರ್ಜೂರ ಎಂದೇ ಜನಜನಿತ ಮುಕ್ತೋಮಿ, ನಬ್‌ತಲಾತ್, ಸೀಫ್, ರುಜೀಜ್, ಶೇಬೇಬಿ, ಸುಫ್ರೀ, ಬರ್ನಿ, ಸಫಾವಿ, ಅಲ್ ಮುನೇಫಿ ಹೀಗೆ ಇತರೆ ಖರ್ಜೂರಗಳು ಸೌದಿ ಅರೇಬಿಯಾದಲ್ಲಿ ಪ್ರಸಿದ್ಧ . ಪ್ರತಿ ಕೆಜಿಗೆ ಕನಿಷ್ಠ ದರ 300 ರೂ. ಇರಾನಿನ ಖರ್ಜೂರಗಳು ಮರಿಯಂ: ಅತ್ಯಂತ ಸುವಾಸನೆಭರಿತ, ಕಡಿಮೆ ಸಿಹಿ. ಪ್ರತಿ ಕೆಜಿಗೆ 500 ರೂ.ದಿಂದ 600 ರೂ. ಮಜಾಫತಿ: ತುಂಬಾ ರುಚಿಕರವಾದ್ದರಿಂದ ದರವೂ ಹೆಚ್ಚು. ಜೋರ್ಡಾನ್‌ನ ಖರ್ಜೂರಗಳು ಮೆದ್ಜೌಲ್: ಈ ಖರ್ಜೂರಗಳನ್ನು ಊಟದ ರೀತಿಯಲ್ಲಿ ಸೇವಿಸಬಹುದು. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಖರ್ಜೂರಗಳು ಇಲ್ಲಿಯ ಸರಕಾರ ಸಬ್ಸಿಡಿ ನೀಡುವ ಮೂಲಕ ಖರ್ಜೂರಗಳನ್ನು ಬೆಳೆಯಲು ಪ್ರೋತ್ಸಾಹಿಸುತ್ತಿದ್ದು, ಪ್ರಸಿದ್ಧ ಖರ್ಜೂರಗಳಾದ ದಬ್ಬಾಸ್, ಲುಲು, ಅಲ್ ಸಫಾ, ಬುಮನ್ ಹಾಗೂ ಫಾರ್ದಾ ಪ್ರತಿ ಕೆಜಿಗೆ 100-200 ರೂ.ಗಳಲ್ಲಿ ದೊರೆಯುತ್ತವೆ. ಇರಾಕ್ ಖರ್ಜೂರಗಳು ಝಹೀದ್: ಪ್ರತಿ ಕೆಜಿಗೆ 50-80 ರೂ.ಗಳಿಗೆ ದೊರೆಯುತ್ತದೆ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಇವು ಪ್ರಸಿದ್ಧ. (ದರಗಳು ೨೮-೭-೨೦೧೪ ರಲ್ಲಿ ಇದ್ದಂತೆ) == ಆಧಾರ == ವಿಜಯ ಕರ್ನಾಟಕ -೨೮-೭೨೦೧೪ [[೨]] [[೩]]